•  
  •  
  •  
  •  
Index   ವಚನ - 580    Search  
 
ಶುಕ್ತಿಕೆಯದು ಕರ್ಮಕಾಂಡ ಸ್ಥಾನ. ಪದ್ಮಪತ್ರವೆ ಜ್ಞಾನಕಾಂಡ ಸ್ಥಾನ. ತಪ್ತಾಯಃ ಪಿಂಡವೆಂದೆ ಭಕ್ತಿಕಾಂಡಸ್ಥಾನವೆಂಬೀ ಸ್ಥಾನತ್ರಯದಲ್ಲಿ ತರುವಾಯಿಂದ ರಸಿಕ ಭೂತವಹ ಸಂಸಾರ ಜಲ ಬಂದು ಬಿದ್ದು ಪ್ರಥಮ ಸ್ಥಾನದಲ್ಲಿ ಫಲವಾಗಿ, ದ್ವಿತೀಯ ಸ್ಥಾನದಲ್ಲಿ ಅಫಲವಾಗಿ, ತೃತೀಯ ಸ್ಥಾನದಲ್ಲಿ ಫಲಾಫಲವೇನೂ ಇಲ್ಲದೆ ಹೋಗಿ ತಾನೆ ನಿರುಪಮಯವಹ ನಿಜಪದದಲ್ಲಿ ನಿಂದ ಕಾರಣ ಈ ಸಮರಸ ಭಕ್ತಿಕಾಂಡವೆ ಅತ್ಯಂತ ಅಧಿಕತರವೆಂದು ಶಿವಾಚಾರ್ಯರು ನಿರೂಪಿಸಿರುವರಯ್ಯ ಶಾಂತವೀರೇಶ್ವರಾ
Transliteration Śuktikeyadu karmakāṇḍa sthāna. Padmapatrave jñānakāṇḍa sthāna. Taptāyaḥ piṇḍavende bhaktikāṇḍasthānavembī sthānatrayadalli taruvāyinda rasika bhūtavaha sansāra jala bandu biddu prathama sthānadalli phalavāgi, dvitīya sthānadalli aphalavāgi, tr̥tīya sthānadalli phalāphalavēnū illade hōgi tāne nirupamayavaha nijapadadalli ninda kāraṇa ī samarasa bhaktikāṇḍave atyanta adhikataravendu śivācāryaru nirūpisiruvarayya śāntavīrēśvarā