ಪುಣ್ಯ ಪಾಪಾತ್ಮಕವಹ ಕ್ರಿಯೆ ಕರ್ಮಕಂಡದಲ್ಲಿ ಮಾಡಿದುದು.
ಶಿಲಾ ಲೇಖನದ ಹಾಂಗೆ, ತೊಡೆದಡೆ ಹೋಗದು.
ಜ್ಞಾನಕಾಂಡದಲ್ಲಿ ಮಾಡಿದುದು, ಭೂಲಿಪಿಯ ಹಾಂಗೆ,
ತೊಡೆದರೆ ಹೋಗದು.
ಭಕ್ತಿಕಾಂಡದಲ್ಲಿ ಮಾಡಿದುದು ಜಲಲಿಪಿಯ ಹಾಂಗೆ;
ಅದೆಂತೆಂದೊಡೆ, ಕಲ್ಲಮೇಲಣ ಲಿಪಿಯ ಲೋಪಿಸಲಾಗದು.
ನೆಲದ ಮೇಲಣ ಲಿಪಿಯು ಲೋಪಿಸಬಹುದು.
ಜಲಲಿಪಿಯು ಮೊದಲಲ್ಲಿ ಬರೆಯಲಾಗದು
ಕಡೆಯಲ್ಲಿ ಲೋಪಿಸಲು ಬಾರದು.
ಅದು ಕಾರಣ ಭಕ್ತಿಕಾಂಡವೆ ನಿರ್ಲೇಪವಾಗಿಹುದಯ್ಯ
ಶಾಂತವೀರೇಶ್ವರಾ
Transliteration Puṇya pāpātmakavaha kriye karmakaṇḍadalli māḍidudu.
Śilā lēkhanada hāṅge, toḍedaḍe hōgadu.
Jñānakāṇḍadalli māḍidudu, bhūlipiya hāṅge,
toḍedare hōgadu.
Bhaktikāṇḍadalli māḍidudu jalalipiya hāṅge;
adentendoḍe, kallamēlaṇa lipiya lōpisalāgadu.
Nelada mēlaṇa lipiyu lōpisabahudu.
Jalalipiyu modalalli bareyalāgadu
kaḍeyalli lōpisalu bāradu.
Adu kāraṇa bhaktikāṇḍave nirlēpavāgihudayya
śāntavīrēśvarā