•  
  •  
  •  
  •  
Index   ವಚನ - 41    Search  
 
`ಆತ್ಮಾsಹಂ' ಎಂಬರು ತಾವು ಆತ್ಮವಿತ್ತುಗಳೆಲ್ಲ. ಆತ್ಮನಂಥವನಿಂಥವನೆಂದು ಕಂಡವರುಂಟೆ ಅಯ್ಯ? `ಆತ್ಮಜ್ಞಾತಾsಹಂ' ಎಂಬ ಶ್ರುತಿಪ್ರಮಾಣವುಂಟೆ ಅಯ್ಯ? ಆತ್ಮ ವಾಙ್ಮನಕ್ಕಗೋಚರನಯ್ಯಾ, ಆತ್ಮ `ತತ್ತ್ವಮಸಿ' ಎಂಬ ವಾಕ್ಯದಿಂದತ್ತತ್ತಲಯ್ಯಾ. ಆತ್ಮನ ಕಂಡಿಹೆನೆಂಬ ಅರೆಮರುಳೆ ಕೇಳಾ, ಆತ್ಮನು ತಾನಾದ ವಸ್ತು, ನೀರು ನೀರ ಕೂಡಿದಂತೆ, ಇಹ ಸಹಜಾತ್ಮನ ಕಾಬಡೆ ಕಾಯವಿಡಿದು ಕಾಣಬಹುದೆ ಅಯ್ಯಾ? ಓಂ ಆತ್ಮನು ಪ್ರಾಣೇಶಲಿಂಗ, ಪ್ರಸಾದಕಾಯವೆಂದರಿದಾತನು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
Transliteration Ātmāshaṁ' embaru tāvu ātmavittugaḷella. Ātmananthavaninthavanendu kaṇḍavaruṇṭe ayya? `Ātmajñātāshaṁ' emba śrutipramāṇavuṇṭe ayya? Ātma vāṅmanakkagōcaranayyā, ātma `tattvamasi' emba vākyadindattattalayyā. Ātmana kaṇḍ'̔ihenemba aremaruḷe kēḷā, ātmanu tānāda vastu, nīru nīra kūḍidante, iha sahajātmana kābaḍe kāyaviḍidu kāṇabahude ayyā? Ōṁ ātmanu prāṇēśaliṅga, prasādakāyavendaridātanu uriliṅgapeddipriya viśvēśvarā.