ಸತ್ತುರೂಪು ಲಿಂಗ, ಚಿತ್ತುರೂಪು ಜಂಗಮ,
ಆನಂದರೂಪು ಪ್ರಸಾದ.
ಇಂತೀ ತ್ರಿವಿಧವಾದ ಅರಿವನು
ಶ್ರೀಗುರು ಇಷ್ಟಲಿಂಗದಲ್ಲಿ ತೋರಿ
ಬಿಜಯಂಗೈಸಿ ಕೊಟ್ಟ ಬಳಿಕ,
ಸತ್ತುಚಿತ್ತಾನಂದವೆಂಬ ಬಟ್ಟಬಯಲೇಕಯ್ಯಾ?
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
Transliteration Satturūpu liṅga, citturūpu jaṅgama,
ānandarūpu prasāda.
Intī trividhavāda arivanu
śrīguru iṣṭaliṅgadalli tōri
bijayaṅgaisi koṭṭa baḷika,
sattucittānandavemba baṭṭabayalēkayyā?
Uriliṅgapeddipriya viśvēśvarā.