ಪಿಂಡಬ್ರಹ್ಮಾಂಡಗಳಿಲ್ಲದಂದು
ಅಷ್ಟದಿಕ್ಪಾಲಕರ ಹುಟ್ಟಿಲ್ಲದಂದು
ನಿಷ್ಕಳ ಪರಂಜೋತಿ ತಾನೊಂದೆ ನೋಡಾ.
ಅದು ತನ್ನ ಚಿತ್ಕಾಂತೆಯ ಸಂಗಸಮರಸದಿಂದ
ಮಹಾಲಿಂಗವೆನಿಸಿತು.
ಆ ಮಹಾಲಿಂಗವೇ ತನ್ನ ಪರಮಾನಂದದಿಂದ
ಪ್ರಸಾದಲಿಂಗವೆಂದು ಜಂಗಮಲಿಂಗವೆಂದು
ಶಿವಲಿಂಗವೆಂದು ಗುರುಲಿಂಗವೆಂದು ಆಚಾರಲಿಂಗವೆಂದು
ಹೀಂಗೆ ಪಂಚಲಿಂಗವೆನಿಸಿತು.ಆ ಪಂಚಲಿಂಗಂಗಳ
ಪ್ರಾಣ ಅಂಗ ಮುಖ ಪದಾರ್ಥಂಗಳಾವುವೆಂದರೆ
ಆಚಾರಲಿಂಗಕ್ಕೆ ಗುರುಲಿಂಗವೇ ಪ್ರಾಣ.
ಆ ಪ್ರಾಣಕ್ಕೆ ಆಚಾರಲಿಂಗವೇ ಅಂಗ.
ಆ ಅಂಗಕ್ಕೆ ಆಚಾರಲಿಂಗದ
ಆಚಾರಾದಿ ಪ್ರಸಾದಲಿಂಗಂಗಳೇ ಪಂಚಮುಖ.
ಆ ಮುಖಂಗಳಿಗೆ ಪಂಚಪ್ರಕಾರದ ಗಂಧಂಗಳೇ ದ್ರವ್ಯಪದಾರ್ಥ.
ಗುರುಲಿಂಗಕ್ಕೆ ಶಿವಲಿಂಗವೇ ಪ್ರಾಣ.
ಆ ಪ್ರಾಣಕ್ಕೆ ಗುರುಲಿಂಗವೇ ಅಂಗ.
ಆ ಅಂಗಕ್ಕೆ ಗುರುಲಿಂಗದ
ಆಚಾರಾದಿ ಪ್ರಸಾದಲಿಂಗಗಳೇ ಪಂಚಮುಖ.
ಆ ಮುಖಂಗಳಿಗೆ ಪಂಚಪ್ರಕಾರದ ರೂಪಂಗಳೇ ದ್ರವ್ಯಪದಾರ್ಥ.
ಶಿವಲಿಂಗಕ್ಕೆ ಜಂಗಮಲಿಂಗವೇ ಪ್ರಾಣ
ಆ ಪ್ರಾಣಕ್ಕೆ ಶಿವಲಿಂಗವೇ ಅಂಗ
ಆ ಅಂಗಕ್ಕೆ ಶಿವಲಿಂಗದ
ಆಚಾರಾದಿ ಪ್ರಸಾದಲಿಂಗಗಳೇ ಪಂಚಮುಖ.
ಆ ಮುಖಂಗಳಿಗೆ ಪಂಚಪ್ರಕಾರದ ರೂಪಂಗಳೇ ದ್ರವ್ಯಪದಾರ್ಥ.
ಜಂಗಮಲಿಂಗಕ್ಕೆ ಪ್ರಸಾದಲಿಂಗವೇ ಪ್ರಾಣ.
ಆ ಪ್ರಾಣಕ್ಕೆ ಜಂಗಮಲಿಂಗವೆ ಅಂಗ
ಆ ಅಂಗಕ್ಕೆ ಜಂಗಮಲಿಂಗದ ಆಚಾರಾದಿ
ಪ್ರಸಾದಲಿಂಗಂಗಳೇ ಪಂಚಮುಖ.
ಆ ಮುಖಂಗಳಿಗೆ ಪಂಚಪ್ರಕಾರದ ಸ್ಪರ್ಶಂಗಳೇ ದ್ರವ್ಯಪದಾರ್ಥ
ಪ್ರಸಾದಲಿಂಗಕ್ಕೆ ಮಹಾಲಿಂಗವೇ ಪ್ರಾಣ.
ಆ ಪ್ರಾಣಕ್ಕೆ ಪ್ರಸಾದಲಿಂಗವೇ ಅಂಗ
ಆ ಅಂಗಕ್ಕೆ ಪ್ರಸಾದಲಿಂಗದ ಆಚರಾದಿ
ಪ್ರಸಾದಲಿಂಗಗಳೇ ಪಂಚಮುಖ
ಆ ಮುಖಂಗಳಿಗೆ ಪಂಚಪ್ರಕಾರದ ಶಬ್ದಂಗಳೇ ದ್ರವ್ಯಪದಾರ್ಥ
ಈ ಪ್ರಕಾರದಲ್ಲಿ ಪಂಚಲಿಂಗಂಗಳ
ಪ್ರಾಣ ಅಂಗ ಮುಖ ಪದಾರ್ಥ ಇಂತಿವರ
ನೆಲೆಯ ತಿಳಿದು ತಟ್ಟುವ ಮುಟ್ಟುವ ಸುಖಂಗಳ
ಆಯಾ ಮುಖಂಗಳಿಗೆ ಕೊಟ್ಟು
ತೃಪ್ತಿಯ ಭಾವದಿಂದ ಮಹಾಲಿಂಗಕ್ಕೆ ಸಮರ್ಪಿಸುವ ಅವಧಾನ
ನಿಮ್ಮ ಶರಣರಿಗಲ್ಲದೆ ಮಿಕ್ಕ ಜಡಜೀವಿಗಳೆತ್ತ ಬಲ್ಲರೋ
ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನ.
Transliteration Piṇḍabrahmāṇḍagaḷilladandu
aṣṭadikpālakara huṭṭilladandu
niṣkaḷa paran̄jōti tānonde nōḍa.
Adu tanna citkānteya saṅgasamarasadinda
mahāliṅgavenisitu.
Ā mahāliṅgavē tanna paramānandadinda
prasādaliṅgavendu jaṅgamaliṅgavendu śivaliṅgavendu
guruliṅgavendu ācāraliṅgavendu
hīṅge pan̄caliṅgavenisitu.
Ā pan̄caliṅgaṅgaḷa
prāṇa aṅga mukha padārthaṅgaḷāvuvendare-
ācāraliṅgakke guruliṅgavē prāṇa.
Ā prāṇakke ācāraliṅgavē aṅga.
Ā aṅgakke ācāraliṅgada
ācārādi prasādaliṅgaṅgaḷē pan̄camukha.
Ā mukhaṅgaḷige pan̄caprakārada gandhaṅgaḷē dravyapadārtha.
Guruliṅgakke śivaliṅgavē prāṇa.
Ā prāṇakke guruliṅgavē aṅga.
Ā aṅgakke śivaliṅgada
ācārādi prasādaliṅgagaḷē pan̄camukha.
Ā mukhaṅgaḷige pan̄caprakārada rūpaṅgaḷē dravyapadārtha.
Jaṅgamaliṅgakke prasādaliṅgavē prāṇa
ā prāṇakke jaṅgamaliṅgavē aṅga
ā aṅgakke jaṅgamaliṅgada ācārādi
prasādaliṅgagaḷē pan̄camukha.
Ā mukhaṅgaḷige pan̄caprakārada sparśaṅgaḷē dravyapadārtha.
Prasādaliṅgakke mahāliṅgavē prāṇa.
Ā prāṇakke prasādaliṅgavē aṅga
ā aṅgakke prasādaliṅgada ācārādi
prasādaliṅgaṅgaḷē pan̄camukha.
Ā mukhaṅgaḷige pan̄caprakārada śabdaṅgaḷē dravyapadārtha
ī prakāradalli pan̄caliṅgaṅgaḷa
prāṇa aṅga mukha padārtha intivara
neleya tiḷidu taṭṭuva muṭṭuva sukhaṅgaḷa
āyā mukhaṅgaḷige koṭṭu
tr̥ptiya bhāvadinda mahāliṅgakke samarpisuva avadhāna
nim'ma śaraṇarigallade mikka jaḍajīvigaḷetta ballarō
ghanaliṅgiya mōhada cennamallikārjuna.