•  
  •  
  •  
  •  
Index   ವಚನ - 67    Search  
 
ಉಭಯಾರ್ಥದಿಂದ ಲಿಂಗವ ನೋಡುವಡೆ ಗುರುವಿಂದ ಬಿಟ್ಟು ಬೇರೆ ಘನವಿಲ್ಲಯ್ಯ, ಉಭಯಾರ್ಥದಿಂದ ಲಿಂಗವ ನೋಡುವಡೆ ಜಂಗಮದಿಂದತಿಶಯವೇನೂ ಇಲ್ಲಯ್ಯ. ಉಭಯಾರ್ಥದಿಂದ ಲಿಂಗವ ನೋಡುವಡೆ ಉಭಯಸ್ಥಳದ ಕುಳವನರಿಯಬೇಕು. ಉಭಯಾರ್ಥದಿಂದ ಲಿಂಗವ ನೋಡುವಡೆ ಉಭಯ ಸಂಕೀರ್ಣಮನವ ತಾಳಲಾಗದು. ಉಭಯಾರ್ಥದಿಂದ ಕೂಡಲಚೆನ್ನಸಂಗಾ ನಿಮ್ಮ ಶರಣರಿಗೆ ಶರಣೆಂಬೆನಯ್ಯಾ.
Transliteration Ubhayārthadinda liṅgava nōḍuvaḍe guruvinda biṭṭu bēre ghanavillayya, ubhayārthadinda liṅgava nōḍuvaḍe jaṅgamadindatiśayavēnū illayya. Ubhayārthadinda liṅgava nōḍuvaḍe ubhayasthaḷada kuḷavanariyabēku. Ubhayārthadinda liṅgava nōḍuvaḍe ubhaya saṅkīrṇamanava tāḷalāgadu. Ubhayārthadinda kūḍalacennasaṅgā nim'ma śaraṇarige śaraṇembenayyā.