•  
  •  
  •  
  •  
Index   ವಚನ - 534    Search  
 
ಜ್ಞಾನದೀಪ್ತಿಯ ಬೆಳಗುವ ತೈಲವಾವುದೆಂದರೆ: ಸದುಮಾನ್ಯರ ನುಡಿಗಡಣದಿಂದೊ[ಸರುವ ಒಸರು]. ಅದು ತಾನೆಂಬ ಅರಿವಿನ ನಿಶ್ಚಯವ ತೋರುವುದು, ಹೀನ ಜಡತೆಯ ಮುಸುಕಿದ ಗ್ರಂಥಿಯನಳಿಸುವುದು ಭಾನು ಬಂದರೆ ಜಗದ ಭ್ರಮೆ ಹರಿವಂತೆ, ಬುಧರೊಳು ನೀನಿರಲು ಕರ್ಮಹರಿವುದು, ಕೂಡಲಚೆನ್ನಸಂಗಮದೇವಾ.
Transliteration Jñānadīptiya beḷaguva tailavāvudendare: Sadumān'yara nuḍigaḍaṇadindo[saruva osaru]. Adu tānemba arivina niścayava tōruvudu, hīna jaḍateya musukida granthiyanaḷisuvudu bhānu bandare jagada bhrame harivante, budharoḷu nīniralu karmaharivudu, kūḍalacennasaṅgamadēvā.
Music Courtesy: