ಶೀಲವಂತರೆಲ್ಲಾ ಶೀಲವಂತರಯ್ಯಾ,
ಭಾಷೆವಂತರೆಲ್ಲಾ ಭಾಷೆವಂತರಯ್ಯಾ,
ವ್ರತವಂತರೆಲ್ಲಾ ವ್ರತವಂತರಯ್ಯಾ,
ಸತ್ಯವಂತರೆಲ್ಲಾ ಸತ್ಯವಂತರಯ್ಯಾ,
ನೇಮವಂತರೆಲ್ಲಾ ನೇಮವಂತರಯ್ಯಾ,
ಕೂಡಲಚೆನ್ನಸಂಗಮದೇವಯ್ಯಾ,
ಸಂಗನಬಸವಣ್ಣನೊಬ್ಬನೆ ಲಿಂಗವಂತನಯ್ಯಾ.
Transliteration Śīlavantarellā śīlavantarayyā,
bhāṣevantarellā bhāṣevantarayyā,
vratavantarellā vratavantarayyā,
satyavantarellā satyavantarayyā,
nēmavantarellā nēmavantarayyā,
kūḍalacennasaṅgamadēvayyā,
saṅganabasavaṇṇanobbane liṅgavantanayyā.