ಉಭಯ ಕಾಮ, ಉಭಯ ಶಕ್ತಿ,
ಉಭಯ ಆಶ್ರಮವು, ಅನಾಶ್ರಮವು,
ಉಭಯ ತಾನೆ ಪ್ರಸಾದಿ.
ಉಭಯನಾಮದ ಮೇಲೆ ನಾಮವಾದುದನು
ಲಿಂಗದೇಹಿಯೆಂಬಾತಂಗರಿಯಬಾರದು.
ಇದು ಕಾರಣ, ಕೂಡಲಚೆನ್ನಸಂಗಾ,
ನಿಮ್ಮ ಪ್ರಸಾದಿಗಲ್ಲದೆ ಅರಿಯಬಾರದು.
Transliteration Ubhaya kāma, ubhaya śakti,
ubhaya āśramavu, anāśramavu,
ubhaya tāne prasādi.
Ubhayanāmada mēle nāmavādudanu
liṅgadēhiyembātaṅgariyabāradu.
Idu kāraṇa, kūḍalacennasaṅgā,
nim'ma prasādigallade ariyabāradu.