•  
  •  
  •  
  •  
Index   ವಚನ - 984    Search  
 
ಅಹುದಹುದು, ಅಂಗಕ್ಕೆ ಲಿಂಗವನರಸಬೇಕಲ್ಲದೆ ಲಿಂಗಕ್ಕೆ ಲಿಂಗವನರಸಲುಂಟೆ? ಪ್ರಾಣಕ್ಕೆ ಜ್ಞಾನವನರಸಬೇಕಲ್ಲದೆ ಜ್ಞಾನಕ್ಕೆ ಜ್ಞಾನವನರಸಲುಂಟೆ? ಎರಡಾಗಿರ್ದುದನೊಂದು ಮಾಡಿಹೆನೆನಬಹುದಲ್ಲದೆ ಒಂದಾಗಿರ್ದುದನೊಂದು ಮಾಡಲಿಲ್ಲ. ಕೂಡಲಚೆನ್ನಸಂಗಯ್ಯನಲ್ಲಿ ನಿಸ್ಸೀಮ ಸಿದ್ಧರಾಮಯ್ಯನ ಶ್ರೀಪಾದಕ್ಕೆ ಶರಣೆಂದು ಬದುಕಿದೆನು ಕಾಣಾ ಪ್ರಭುವೆ.
Transliteration Ahudahudu, aṅgakke liṅgavanarasabēkallade liṅgakke liṅgavanarasaluṇṭe? Prāṇakke jñānavanarasabēkallade jñānakke jñānavanarasaluṇṭe? Eraḍāgirdudanondu māḍ'̔ihenenabahudallade ondāgirdudanondu māḍalilla. Kūḍalacennasaṅgayyanalli nis'sīma sid'dharāmayyana śrīpādakke śaraṇendu badukidenu kāṇā prabhuve.