•  
  •  
  •  
  •  
Index   ವಚನ - 1007    Search  
 
ಆದಿಯಲ್ಲಿ ಬಂದುದಲ್ಲ, ನಾದಬಿಂದುವಿನಲ್ಲ ಆದುದಲ್ಲ. ನಾದವನು ಕಳೆ ನುಂಗಿ, ಕಳೆಯ ನಾದವ ನುಂಗಿ, ಹೊಳೆವ ಲಿಂಗ ನಿನಗೆಂತು ಸಾಧ್ಯವಾಯಿತ್ತು ಹೇಳಾ? ಅಪ್ಪಣೆಯಿಲ್ಲದ ಅಪ್ಪಣೆ ಸಲುವುದೆ ಜಂಗಮದೊಳಗೆ? ಇದು ಕಾರಣ- ಕೂಡಲಚೆನ್ನಸಂಗಮದೇವರಲ್ಲಿ ಆದಿಸೋಂಕು ನಿನಗೆಂತು ಸಾಧ್ಯವಾಯಿತ್ತು ಹೇಳಾ ಪ್ರಭುವೆ.
Transliteration Ādiyalli bandudalla, nādabinduvinalla ādudalla. Nādavanu kaḷe nuṅgi, kaḷeya nādava nuṅgi, hoḷeva liṅga ninagentu sādhyavāyittu hēḷā? Appaṇeyillada appaṇe saluvude jaṅgamadoḷage? Idu kāraṇa- kūḍalacennasaṅgamadēvaralli ādisōṅku ninagentu sādhyavāyittu hēḷā prabhuve.