•  
  •  
  •  
  •  
Index   ವಚನ - 1208    Search  
 
ಗುರುವಾದುದು ತಪ್ಪು, ಲಿಂಗವಾದುದು ತಪ್ಪು, ಜಂಗಮವಾದುದು ತಪ್ಪು. ಈ ತ್ರಿವಿಧ ಭೇದದ ಸಂಬಂಧದ ಸಕೀಲವ, ಸಂಚದ ನಿಕ್ಷೇಪವ ಅರಿತರೆ ಈ ಲೋಕವೇನು? ಆ ಲೋಕವೇನು? ಈರೇಳುಭುವನ ಹದಿನಾಲ್ಕುಲೋಕದ ನಿಸ್ಸಾರಾಯವ ಬಿಟ್ಟು, ತನ್ನೊಳಗೆ ಇದ್ದ ಲಿಂಗಸಾರಾಯದ ಯೋಗಿಯಾದರೆ ಸರ್ವಾಂಗವೆಲ್ಲವೂ ಲಿಂಗ, ಇದ್ದುದೆ ಕೈಲಾಸ, ಕೂಡಲಚೆನ್ನಸಂಗಮದೇವ.
Transliteration Guruvādudu tappu, liṅgavādudu tappu, jaṅgamavādudu tappu. Ī trividha bhēdada sambandhada sakīlava, san̄cada nikṣēpava aritare ī lōkavēnu? Ā lōkavēnu? Īrēḷubhuvana hadinālkulōkada nis'sārāyava biṭṭu, tannoḷage idda liṅgasārāyada yōgiyādare sarvāṅgavellavū liṅga, iddude kailāsa, kūḍalacennasaṅgamadēva.