•  
  •  
  •  
  •  
Index   ವಚನ - 1264    Search  
 
ತನಗೆ ತಾನೆ ಹುಟ್ಟಿದನಾಗಿ, ತಾನೆ ಸ್ಥಾವರವಾದ ಆ ಲಿಂಗವು, ತನ್ನಲ್ಲಿರ್ದ ರುಚಿಯ ಅವ್ಯಕ್ತಕ್ರೀಯಿಂದ ಮನವೆ ಬಾಯಾಗಿ ಉಂಬ ಲಿಂಗವು, ಇತರರ ಸುಖವ ಬಲ್ಲುದೆ, ಕೂಡಲಚೆನ್ನಸಂಗಮದೇವಾ?
Transliteration Tanage tāne huṭṭidanāgi, tāne sthāvaravāda ā liṅgavu, tannallirda ruciya avyaktakrīyinda manave bāyāgi umba liṅgavu, itarara sukhava ballude, kūḍalacennasaṅgamadēvā?