•  
  •  
  •  
  •  
Index   ವಚನ - 1515    Search  
 
ಮಾಂಸಕ್ಕೆ ಮೆಚ್ಚಿದ ಅರಸುಗಳು ನಾಯಂಜಲ ತಿಂದು ನರಕಕ್ಕಿಳಿದು ಹೋದರು. ಸೂಳೆಗೆ ಮೆಚ್ಚಿದವರು ಸೂಳೆಯ ಬಂಟರೆಂಜಲ ತಿಂದು ನರಕಕ್ಕಿಳಿದು ಹೋದರು-ಇದು ಲೋಕವರಿಯಲುಂಟು. ಲಿಂಗವ ಮೆಚ್ಚಿದ ಸದ್ಭಕ್ತರು ಗುರುಲಿಂಗಜಂಗಮದ ಒಕ್ಕು ಮಿಕ್ಕ ಪ್ರಸಾದವ ಕೊಂಡು ಆಗಳೆ ಅಂತೆ ಮೋಕ್ಷವನೈದಿದರು, ಶಿವರಹಸ್ಯದಲ್ಲಿ; "ಶ್ವಾನೋಚ್ಛಿಷ್ಟಾಯತೇ ರಾಜಾ ವೇಶ್ಯೋಚ್ಛಿಷ್ಟಂ ಜಗತ್ತ್ರಯಂ| ಜಂಗಮೋಚ್ಛಿಷ್ಟಭುಂಜಾನೋ ಸದ್ಯೋ ಮುಕ್ತೋ ನ ಸಂಶಯಃ"|| ಗುರುಲಿಂಗಜಂಗಮದ ಪ್ರಸಾದವ ಕೊಂಬವರ ಕಂಡು ನಿಂದಿಸುವರ ಬಾಯಲ್ಲಿ ಬಾಲಹುಳು ಸುರಿಯದೆ ಮಾಣ್ಬವೆ ಕೂಡಲಚೆನ್ನಸಂಗಮದೇವಾ?
Transliteration Mānsakke meccida arasugaḷu nāyan̄jala tindu narakakkiḷidu hōdaru. Sūḷege meccidavaru sūḷeya baṇṭaren̄jala tindu narakakkiḷidu hōdaru-idu lōkavariyaluṇṭu. Liṅgava meccida sadbhaktaru guruliṅgajaṅgamada okku mikka prasādava koṇḍu āgaḷe ante mōkṣavanaididaru, śivarahasyadalli; śvānōcchiṣṭāyatē rājā vēśyōcchiṣṭaṁ jagattrayaṁ| jaṅgamōcchiṣṭabhun̄jānō sadyō muktō na sanśayaḥ|| guruliṅgajaṅgamada prasādava kombavara kaṇḍu nindisuvara bāyalli bālahuḷu suriyade māṇbave kūḍalacennasaṅgamadēvā?