ಇಳೆಯ ಮೇಲಿರ್ದ ಶಿಲೆಯೆಲ್ಲ
ಲಿಂಗವಾದಡೆ ಗುರುವಿನ ಹಾಂಗೆ ಕೈ,
ಜಲ ನದಿಯಲ್ಲಿ ತೀರ್ಥವಾದಡೆ, ಲಿಂಗದ ಹಾಂಗೆ ಕೈ,
ಬೆಳೆದ ಬೆಳೆಯಲ್ಲ ಪ್ರಸಿದ್ಧವಾದಡೆ, ಜಂಗಮದ ಹಾಂಗೆ ಕೈ,
ಎಂದುದಾಗಿ ತ್ರಿವಿಧದ ಹಂಗು ಹಿಂಗಿತ್ತು ಕಾಣಾ,
ಜಂಗಮಲಿಂಗಪ್ರಭುವೆ.
Transliteration Ḷeya mēlirda śileyella
liṅgavādaḍe guruvina hāṅge kai,
jala nadiyalli tīrthavādaḍe, liṅgada hāṅge kai,
beḷeda beḷeyalla prasid'dhavādaḍe, jaṅgamada hāṅge kai,
endudāgi trividhada haṅgu hiṅgittu kāṇā,
jaṅgamaliṅgaprabhuve.