•  
  •  
  •  
  •  
Index   ವಚನ - 19    Search  
 
ಉದಕವ ಬೆರೆಸಿದ ಕುಂಪಟಿಯಂತೆ, ಬಹುಗಂಧವ ಕೂಡಿದ ವಾಯುವಿನಂತೆ, ಗುಣ ದೋಷಂಗಳ ವಿಚಾರಿಸದಿಪ್ಪುದು ಸದ್ಭಕ್ತನಿರವು, ಮಾಡುವ ಭೇದ ಸ್ಥಲ; ಸರಮೃತ್ತಿಕೆಯಲ್ಲಿ ಒಸರಲಿಲ್ಲದೆ ನಿಂದಂತೆ; ಈಶ್ವರನ ಶರಣರಿಗೆ ಭಕ್ತಿಯ ಮಾಡುವ ದಾಸೋಹದ ಸದ್ಭಕ್ತನ ಇರವು. ಅದು ಸುಕ್ಷೇತ್ರವಾಸ, ಕಾಲಾಂತಕ ಭೀಮೇಶ್ವರಲಿಂಗನ ತೆರಪಿಲ್ಲದ ಸುಖವಾಸ.
Transliteration Udakava beresida kumpaṭiyante, bahugandhava kūḍida vāyuvinante, guṇa dōṣaṅgaḷa vicārisadippudu sadbhaktaniravu, māḍuva bhēda sthala; saramr̥ttikeyalli osaralillade nindante; īśvarana śaraṇarige bhaktiya māḍuva dāsōhada sadbhaktana iravu. Adu sukṣētravāsa, kālāntaka bhīmēśvaraliṅgana terapillada sukhavāsa.