•  
  •  
  •  
  •  
Index   ವಚನ - 20    Search  
 
ಉಪ್ಪಿನ ನೀರಿಂಗೆ ಪುನನಾಮ ಬಪ್ಪುದಲ್ಲದೆ ಮುತ್ತಿನ ನೀರಿಂಗೆ ಪುನನಾಮವುಂಟೆ? ಪೂರ್ವವನಳಿದು ಪುನರ್ಜಾತನಾದಲ್ಲಿ ಮತ್ತೆ ಲೌಕಿಕವ ಬೆರಸಬಹುದೆ? ರುಂದಿಯ ಫಳದಂತೆ ಸಂದೇಹ ನಾಮವಾಯಿತ್ತು. ಭಕ್ತಜಂಗಮವಾಗಿ ಮರ್ತ್ಯರು ಎನ್ನವರೆಂದಡೆ ಕರ್ತೃತ್ವ ಭಕ್ತಿಯಿತ್ತಲೆ ಉಳಿಯಿತ್ತು. ಕಾಲಾಂತಕ ಭೀಮೇಶ್ವರಲಿಂಗನು ಅವರಿಗೆ ಕತ್ತಲೆಯಾಗಿರ್ಪನು.
Transliteration Uppina nīriṅge punanāma bappudallade muttina nīriṅge punanāmavuṇṭe? Pūrvavanaḷidu punarjātanādalli matte laukikava berasabahude? Rundiya phaḷadante sandēha nāmavāyittu. Bhaktajaṅgamavāgi martyaru ennavarendaḍe kartr̥tva bhaktiyittale uḷiyittu. Kālāntaka bhīmēśvaraliṅganu avarige kattaleyāgirpanu.