ಹಲವು ಸಂಸರ್ಗದಿಂದ ಬಂದ ಜಲ ನಿಲವಾಗಿ
ಒಂದು ಠಾವಿನಲ್ಲಿ ನದಿ ನಾಮವಾಯಿತ್ತು.
ನಾನಾಭಾವಂಗಳಲ್ಲಿ ನೊಂದು ಬಂದ ಜೀವ
ಒಂದು ನೆಲೆಯಲ್ಲಿ ನಿಂದು ಸಂದೇಹವ ಬಿಡಲಾಗಿ
ಪರಮನಾಯಿತ್ತು.
ಪ್ರಕಾಶವ ಕಂಡು ಕಾಲಾಂತಕ
ಭೀಮೇಶ್ವರಲಿಂಗವೆಂಬ ನಾಮವಾಯಿತ್ತು.
Transliteration Halavu sansargadinda banda jala nilavāgi
ondu ṭhāvinalli nadi nāmavāyittu.
Nānābhāvaṅgaḷalli nondu banda jīva
ondu neleyalli nindu sandēhava biḍalāgi
paramanāyittu.
Prakāśava kaṇḍu kālāntaka
bhīmēśvaraliṅgavemba nāmavāyittu.