•  
  •  
  •  
  •  
Index   ವಚನ - 229    Search  
 
ಆ ಆದಿ ಪ್ರಣವದ ನೆನಹುಮಾತ್ರದಲ್ಲಿ ಆದಿ ಅಕಾರ, ಆದಿ ಉಕಾರ,ಆದಿ ಮಕಾರವೆಂಬ ಪ್ರಣವತ್ರಯಂಗಳುತ್ಪತ್ಯವಾಯಿತ್ತು ಆ ಆದಿ ಅಕಾರ, ಆದಿ ಉಕಾರ, ಆದಿ ಮಕಾರ- ಇವು ಮೂರು ಬೀಜಾಕ್ಷರ. ಆದಿ ಅಕಾರವೇ ಆದಿನಾದ, ಆದಿ ಉಕಾರವೇ ಆದಿಬಿಂದು, ಆದಿ ಮಕಾರವೇ ಆದಿಕಲೆ. ಆದಿ ಅಕಾರವೇ ನಿರಾಳಾತ್ಮನು,ಆದಿ ಉಕಾರವೇ ನಿರಂಜನಾತ್ಮನು, ಆದಿ ಮಕಾರವೇ ನಿರಾಮಯಾತ್ಮಕನು ನೋಡಾ. ಇದಕ್ಕೆ ಶ್ರೀ ಮಹಾದೇವೋವಾಚ: ಅಕಾರಂ ನಾದರೂಪೇಣ ಉಕಾರೋ ಬಿಂದುರುಚ್ಯತೇ | ಮಕಾರಂತು ಕಲಾಶ್ಚೈವ ನಾದಬಿಂದು ಕಲಾತ್ಮನೇ || ಓಂಕಾರೋ ಜ್ಯೋತಿರೂಪಂಚ ಓಂಕಾರೋ ಪರಮೇಶ್ವರಃ | ನಾದರೂಪಂ ನಿರಾಲಂಬಂ ಬಿಂದುರೂಪಂ ನಿರಂಜನಂ | ನಾದಬಿಂದೂ ಭಯೋಃ ಕರ್ತಾ ರುದ್ರಃ ಶಂಭುಃ ನಿರಾಮಯಃ || ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
Transliteration Ā ādi praṇavada nenahumātradalli ādi akāra, ādi ukāra,ādi makāravemba praṇavatrayaṅgaḷutpatyavāyittu ā ādi akāra, ādi ukāra, ādi makāra- ivu mūru bījākṣara. Ādi akāravē ādināda, ādi ukāravē ādibindu, ādi makāravē ādikale. Ādi akāravē nirāḷātmanu,ādi ukāravē niran̄janātmanu, ādi makāravē nirāmayātmakanu nōḍā. Idakke śrī mahādēvōvāca: Akāraṁ nādarūpēṇa ukārō bindurucyatē | makārantu kalāścaiva nādabindu kalātmanē || ōṅkārō jyōtirūpan̄ca ōṅkārō paramēśvaraḥ | nādarūpaṁ nirālambaṁ bindurūpaṁ niran̄janaṁ | nādabindū bhayōḥ kartā rudraḥ śambhuḥ nirāmayaḥ || intendudāgi, apramāṇakūḍalasaṅgamadēvā.