ಜೀವನೆಂಬ ಶಿವಾಲಯದೊಳು
ಶಿವನೆಂಬ ಲಿಂಗವ ನೆಲೆಗೊಳಿಸಿ
ಅಜ್ಞಾನವೆಂಬ ನಿರ್ಮಾಲ್ಯವಂ ಕಳೆದು
ಸೋಹಂಭಾವದಲ್ಲಿ ಪೂಜಿಸುತ್ತಿರಲು
ಎನ್ನ ಭವರೋಗಂಗಳು ಬಯಲಾಗಿ
ಭವರಹಿತನಾದೆನು ಕಾಣಾ
ಅಪ್ರಮಾಣಕೂಡಲಸಂಗಮದೇವಾ.
Transliteration Jīvanemba śivālayadoḷu
śivanemba liṅgava nelegoḷisi
ajñānavemba nirmālyavaṁ kaḷedu
sōhambhāvadalli pūjisuttiralu
enna bhavarōgaṅgaḷu bayalāgi
bhavarahitanādenu kāṇā
apramāṇakūḍalasaṅgamadēvā.