ಎನ್ನ ದೇಹವೆಂಬ ಪ್ರಾಕಾರದೊಳು
ಮನವೆಂಬ ಶಿವಾಲಯ ನೋಡಾ.
ಮನವೆಂಬ ಶಿವಾಲಯದೊಳು
ಚಿದ್ರೂಪವೆಂಬ ಸಿಂಹಾಸನ ನೋಡಾ.
ಚಿದ್ರೂಪವೆಂಬ ಸಿಂಹಾಸನದ ಮೇಲೆ
ಚಿತ್ಪ್ರಕಾಶವೆಂಬ ಲಿಂಗವ ನೆಲೆಗೊಳಿಸಿ
ನಿಶ್ಚಿಂತವೆಂಬ ಹಸ್ತದಲ್ಲಿ ಮುಟ್ಟಿ ಪೂಜಿಸಲು
ಭವಮಾಲೆ ಹಿಂಗಿ ಭವರಹಿತನಾದೆನು ಕಾಣಾ
ಅಪ್ರಮಾಣಕೂಡಲಸಂಗಮದೇವಾ.
Transliteration Enna dēhavemba prākāradoḷu
manavemba śivālaya nōḍā.
Manavemba śivālayadoḷu
cidrūpavemba sinhāsana nōḍā.
Cidrūpavemba sinhāsanada mēle
citprakāśavemba liṅgava nelegoḷisi
niścintavemba hastadalli muṭṭi pūjisalu
bhavamāle hiṅgi bhavarahitanādenu kāṇā
apramāṇakūḍalasaṅgamadēvā.