•  
  •  
  •  
  •  
Index   ವಚನ - 368    Search  
 
ಪ್ರಾಣವೆ ಲಿಂಗವಾಗಿ, ಲಿಂಗವೆ ಪ್ರಾಣವಾಗಿ, ಸುಖದುಃಖ ಭಯವು ತನಗಿಲ್ಲದಿಹುದೀಗ ಪ್ರಾಣಲಿಂಗಿಸ್ಥಲ ನೋಡಾ. ಇದಕ್ಕೆ ಈಶ್ವರೋsವಾಚ: ತಥಾ ಪ್ರಾಣೇ ಗುಣೇ ಲಿಂಗೇ ಲಿಂಗಪ್ರಾಣಸಮಾಹಿತಃ | ಸುಖದುಃಖೇ ಭಯಂ ನಾಸ್ತಿ ಪ್ರಾಣಲಿಂಗಿಸ್ಥಲಂ ಭವೇತ್ || '' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
Transliteration Prāṇave liṅgavāgi, liṅgave prāṇavāgi, sukhaduḥkha bhayavu tanagilladihudīga prāṇaliṅgisthala nōḍā. Idakke īśvarōsvāca: Tathā prāṇē guṇē liṅgē liṅgaprāṇasamāhitaḥ | sukhaduḥkhē bhayaṁ nāsti prāṇaliṅgisthalaṁ bhavēt ||'' intendudāgi, apramāṇakūḍalasaṅgamadēvā.