ಆ ಶಿವತತ್ವದ ಪೃಥ್ವಿಯ ಮೇಲೆ ನಿರಾಳ ಆಧಾರಚಕ್ರ.
ಅಲ್ಲಿಯ ಪದ್ಮ ಐನೂರುನಾಲ್ವತ್ತುದಳದ ಪದ್ಮ,
ಆ ಪದ್ಮಕ್ಕೆ ವರ್ಣವಿಲ್ಲ.
ಅಲ್ಲಿಯ ಅಕ್ಷರ ಐನೂರು ನಾಲ್ವತ್ತಕ್ಷರ;
ಆ ಅಕ್ಷರಕ್ಕೆ ರೂಪಿಲ್ಲ.
ಅಲ್ಲಿಯ ಶಕ್ತಿ ನಿರಾಳರುದ್ರಶಕ್ತಿ;
ನಿರಾಳಬ್ರಹ್ಮವೆ ಅಧಿದೇವತೆ.
ಅಲ್ಲಿಯ ನಾದ ಅಕಾರನಾದ.
ಅಲ್ಲಿಯ ಬೀಜಾಕ್ಷರ ಅಕಾರ ನೋಡಾ,
ಅಪ್ರಮಾಣಕೂಡಲಸಂಗಮದೇವಾ.
Transliteration Ā śivatatvada pr̥thviya mēle nirāḷa ādhāracakra.
Alliya padma ainūrunālvattudaḷada padma,
ā padmakke varṇavilla.
Alliya akṣara ainūru nālvattakṣara;
ā akṣarakke rūpilla.
Alliya śakti nirāḷarudraśakti;
nirāḷabrahmave adhidēvate.
Alliya nāda akāranāda.
Alliya bījākṣara akāra nōḍā,
apramāṇakūḍalasaṅgamadēvā