ಜಾಗ್ರದಲ್ಲಿಯ ಸ್ವಪ್ನವಾವುದು?
ಶಬ್ದಾದಿಗಳೈದು, ಶ್ರೋತ್ರಾದಿಗಳೈದು, ವಚನಾದಿಗಳೈದು,
ವಾಗಾದಿಗಳೈದು, ಕರಣ ನಾಲ್ಕು, ಪುರುಷನೊಬ್ಬ,
ಇಂತೀ ಇಪ್ಪತ್ತೈದು ಕರಣಂಗಳೊಡನೆ ಕೂಡಿ
ಅವರ ಕಂಡ ಠಾವನು ಹೇಳುವುದು
ಜಾಗ್ರದಲ್ಲಿಯ ಸ್ವಪ್ನ ನೋಡಾ
ಅಪ್ರಮಾಣಕೂಡಲಸಂಗಮದೇವಾ.
Transliteration Jāgradalliya svapnavāvudu?
Śabdādigaḷaidu, śrōtrādigaḷaidu, vacanādigaḷaidu,
vāgādigaḷaidu, karaṇa nālku, puruṣanobba,
intī ippattaidu karaṇaṅgaḷoḍane kūḍi
avara kaṇḍa ṭhāvanu hēḷuvudu
jāgradalliya svapna nōḍā
apramāṇakūḍalasaṅgamadēvā.