ಇನ್ನು ಕೇವಲಾವಸ್ಥೆಯ ದರ್ಶನವದೆಂತೆಂದಡೆ:
ಮುಂದೆ ಹೇಳಿದ ಅವಸ್ಥೆಗಳನು ಬಿಟ್ಟು ಬೇರಾಗಿ
ಒಂದೆಂಬುದು ಕೆಟ್ಟ ಠಾವು ಕೇವಲಾವಸ್ಥೆ.
ಇನ್ನು ಸಕಲಾವಸ್ಥೆಯ ದರ್ಶನವದೆಂತೆಂದಡೆ:
ಮುಂದೆ ಹೇಳಿದ ಅರಿವೇ ಸ್ವರೂಪವಾಗಿ
ಆತನ ಕಂಡ ಠಾವು ಸಕಲಾವಸ್ಥೆ ನೋಡಾ
ಅಪ್ರಮಾಣಕೂಡಲಸಂಗಮದೇವಾ.
Transliteration Innu kēvalāvastheya darśanavadentendaḍe:
Munde hēḷida avasthegaḷanu biṭṭu bērāgi
ondembudu keṭṭa ṭhāvu kēvalāvasthe.
Innu sakalāvastheya darśanavadentendaḍe:
Munde hēḷida arivē svarūpavāgi
ātana kaṇḍa ṭhāvu sakalāvasthe nōḍā
apramāṇakūḍalasaṅgamadēvā.