ಇನ್ನು ಶುದ್ಧಾವಸ್ಥೆಯ ದರ್ಶನವೆಂತೆಂದಡೆ:
ಮುಂದೆ ಹೇಳಿದ ಕೇವಲದಲ್ಲಿ ಒಂದೆಂಬುದು ಕೆಟ್ಟ ಠಾವನು
ಸಕಲದಲ್ಲಿ ಕರಣಂಗಳ ಕೂಟವನು ಬಿಟ್ಟು,
ಈ ಎರಡವಸ್ಥೆಯು ಇವನಿಗೆ ಪ್ರತಿ ಇಲ್ಲವೆಂದು ಕಂಡುದು
ಶುದ್ಧಾವಸ್ಥೆ ನೋಡಾ
ಅಪ್ರಮಾಣಕೂಡಲಸಂಗಮದೇವಾ.
Transliteration Innu śud'dhāvastheya darśanaventendaḍe:
Munde hēḷida kēvaladalli ondembudu keṭṭa ṭhāvanu
sakaladalli karaṇaṅgaḷa kūṭavanu biṭṭu,
ī eraḍavastheyu ivanige prati illavendu kaṇḍudu
śud'dhāvasthe nōḍā
apramāṇakūḍalasaṅgamadēvā.