ಅವನು ಅವಳು ಅದು ನಾನೆಂಬ
ಜ್ಯೋತಿ ಅಡಗಿತ್ತಾಗಿ ಕರ್ಮ ನಷ್ಟ.
ರೂಪ ನಿರೂಪೆಂಬುದು ಕೆಟ್ಟುದಾಗಿ ಮಾಯೆ ನಷ್ಟ.
ಅರಿವು ತಲೆದೋರಿತ್ತಾಗಿ ಆಣವ ನಷ್ಟ.
ಶಿವಪ್ರಕಾಶವಾದ ಕಾರಣ ತಿರೋಧಾನಶಕ್ತಿ ನಷ್ಟ.
ಫಲಪದವಿಗಳು ಬಯಕೆ ಹಿಂಗಿತ್ತಾಗಿ
ಇಚ್ಛಾಶಕ್ತಿ ನಷ್ಟ ನೋಡಾ
ಅಪ್ರಮಾಣಕೂಡಲಸಂಗಮದೇವಾ.
Transliteration Avanu avaḷu adu nānemba
jyōti aḍagittāgi karma naṣṭa.
Rūpa nirūpembudu keṭṭudāgi māye naṣṭa.
Arivu taledōrittāgi āṇava naṣṭa.
Śivaprakāśavāda kāraṇa tirōdhānaśakti naṣṭa.
Phalapadavigaḷu bayake hiṅgittāgi
icchāśakti naṣṭa nōḍā
apramāṇakūḍalasaṅgamadēvā.