•  
  •  
  •  
  •  
Index   ವಚನ - 704    Search  
 
ಇನ್ನು ಮೂವತ್ತಾರು ತತ್ತ್ವಂಗಳುತ್ಪತ್ಯವದೆಂತೆಂದಡೆ: ಪರಶಿವತತ್ವ ತಾನೆ ತನ್ನ ಲೀಲಾವಿನೋದಕ್ಕೆ ಸಕಲನಿಃಕಲತತ್ವವಾಯಿತ್ತು. ಸಕಲನಿಃಕಲತತ್ವದಲ್ಲಿ ಮೂವತ್ತಾರು ತತ್ವಂಗಳುತ್ಪತ್ಯವಾಯಿತ್ತು. ಆ ನಿಃಕಲತತ್ವದಲ್ಲಿ ದಶತತ್ವ ಉತ್ಪತ್ಯವದೆಂತೆಂದಡೆ: ಪರಾಶಕ್ತಿ ಸದಾಶಿವ ಈಶ್ವರ ಶುದ್ಧವಿದ್ಯೆ ಮಾಯೆ ಕಾಲ ನಿಯತಿ ಕಲೆ ವಿದ್ಯೆ ರಾಗ-ಈ ದಶತತ್ವಂಗಳು ನಿಃಕಲತತ್ವದಲ್ಲಿ ಹುಟ್ಟಿತ್ತು ನೋಡಾ, ಅಪ್ರಮಾಣಕೂಡಲಸಂಗಮದೇವಾ.
Transliteration Innu mūvattāru tattvaṅgaḷutpatyavadentendaḍe: Paraśivatatva tāne tanna līlāvinōdakke sakalaniḥkalatatvavāyittu. Sakalaniḥkalatatvadalli mūvattāru tatvaṅgaḷutpatyavāyittu. Ā niḥkalatatvadalli daśatatva utpatyavadentendaḍe: Parāśakti sadāśiva īśvara śud'dhavidye māye kāla niyati kale vidye rāga-ī daśatatvaṅgaḷu niḥkalatatvadalli huṭṭittu nōḍā, apramāṇakūḍalasaṅgamadēvā.