ವಾಕ್ ಶ್ರೋತ್ರ ಜ್ಞಾನ ಶಬ್ದ ಮಹಾಕಾಶ ಸದಾಶಿವನು
ಈ ಆರು ತತ್ತ್ವಂಗಳು
ಆ ಅಖಂಡ ಮಹಾಜ್ಯೋತಿಪ್ರಣವದ ದರ್ಪಣಾಕಾರವಾಗಿಹ
ವಿಜ್ಞಾನಬ್ರಹ್ಮದಲ್ಲಿ ಅಡಗಿತ್ತು ನೋಡಾ.
ಇದಕ್ಕೆ ಮಹಾವಾತುಲಾಗಮೇ:
ಸದಾಶಿವಂ ಮಹಾಕಾಶಂ ಶಬ್ದಂ ಜ್ಞಾನಂ ಚ ಶ್ರೋತ್ರಕಂ |
ವಾಕ್ ತಥಾ ಷಡ್ವಿಧಂ ಪ್ರೋಕ್ತಂ ವಿಜ್ಞಾನಬ್ರಹ್ಮಲೀಯತೇ || ''
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ.
Transliteration Vāk śrōtra jñāna śabda mahākāśa sadāśivanu
ī āru tattvaṅgaḷu
ā akhaṇḍa mahājyōtipraṇavada darpaṇākāravāgiha
vijñānabrahmadalli aḍagittu nōḍā.
Idakke mahāvātulāgamē:
Sadāśivaṁ mahākāśaṁ śabdaṁ jñānaṁ ca śrōtrakaṁ |
vāk tathā ṣaḍvidhaṁ prōktaṁ vijñānabrahmalīyatē ||''
intendudāgi,
apramāṇakūḍalasaṅgamadēvā.