•  
  •  
  •  
  •  
Index   ವಚನ - 726    Search  
 
ಪಾಣಿ ತ್ವಕ್ಕು ಮನ ಸ್ಪರ್ಶ ವಾಯು ಈಶ್ವರನು ಈ ಆರು ತತ್ತ್ವಂಗಳು ಅಖಂಡ ಮಹಾಜ್ಯೋತಿಪ್ರಣವದ ಅರ್ಧಚಂದ್ರಕಸ್ವರೂಪವಾಗಿಹ ಆನಂದಬ್ರಹ್ಮದಲ್ಲಿ ಅಡಗಿತ್ತು ನೋಡಾ. ಇದಕ್ಕೆ ಮಹಾವಾತುಲಾಗಮೇ: ಈಶ್ವರೋ ವಾಯು ಸ್ಪರ್ಶ ಮನ ಸ್ತ್ವತ್ ಪಾಣಿರುಚ್ಯತೇ | ಷಡ್ ಸಂಮಿಶ್ರಿತಂ ಯಸ್ತು ಬ್ರಹ್ಮಾನಂದೇ ವಿಲೀಯತೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
Transliteration Pāṇi tvakku mana sparśa vāyu īśvaranu ī āru tattvaṅgaḷu akhaṇḍa mahājyōtipraṇavada ardhacandrakasvarūpavāgiha ānandabrahmadalli aḍagittu nōḍā. Idakke mahāvātulāgamē: Īśvarō vāyu sparśa mana stvat pāṇirucyatē | ṣaḍ sammiśritaṁ yastu brahmānandē vilīyatē ||'' intendudāgi, apramāṇakūḍalasaṅgamadēvā.