ಪಾದ ನೇತ್ರ ಅಹಂಕಾರ ರೂಪ ಅಗ್ನಿ ರುದ್ರನು
ಈ ಆರು ತತ್ತ್ವಂಗಳು
ಆ ಅಖಂಡ ಮಹಾಜ್ಯೋತಿಪ್ರಣವದ ಕುಂಡಲಾಕಾರವಾಗಿಹ
ಕಲಾಬ್ರಹ್ಮದಲ್ಲಿ ಅಡಗಿತ್ತು ನೋಡಾ.
ಇದಕ್ಕೆ ಮಹಾವಾತುಲಾಗಮೇ:
ರುದ್ರೋ ತೇಜಃ ತಥಾ ರೂಪಂ ಮಹಾನೇತ್ರಂ ಚ ಪಾದಯೋ ||
ಷಡಂಗಮಿಶ್ರಿತಂ ಚೇತಿ ಕಲಾಬ್ರಹ್ಮಣಿ ಲೀಯತೇ ||''
ಇಂತೆಂದುದಾಗಿ,
ಅಪ್ರಮಾಣಕೂಡಲಸಂಗಮದೇವಾ.
Transliteration Pāda nētra ahaṅkāra rūpa agni rudranu
ī āru tattvaṅgaḷu
ā akhaṇḍa mahājyōtipraṇavada kuṇḍalākāravāgiha
kalābrahmadalli aḍagittu nōḍā.
Idakke mahāvātulāgamē:
Rudrō tējaḥ tathā rūpaṁ mahānētraṁ ca pādayō ||
ṣaḍaṅgamiśritaṁ cēti kalābrahmaṇi līyatē ||''
intendudāgi,
apramāṇakūḍalasaṅgamadēvā.