ಸರ್ಪನ ಹೆಸರ ಹೇಳಿದಡೆ ವಿಷ ಹತ್ತಿತ್ತು ನೋಡಾ,
ಅತ್ತತ್ತ ಏನ ಮಾಡುವೆ ಯಂತ್ರ ಮಂತ್ರವಾದಿಗಳಿಗಳವಲ್ಲ ನೋಡಾ.
ಒಂದಿರುಹೆ ಅರುವತ್ತಾರುಕೋಟಿ ಕೋಣನ ನುಂಗಿತ್ತು ನೋಡಾ,
ಸೊಳ್ಳೆಯ ಕಾಲಬೆರಳಲ್ಲಿ ಎಂಟಾನೆ ನಿಂತು ಆಡುತ್ತಿವೆ ನೋಡಾ
ಅಪ್ರಮಾಣಕೂಡಲಸಂಗಮದೇವಾ.
Transliteration Sarpana hesara hēḷidaḍe viṣa hattittu nōḍā,
attatta ēna māḍuve yantra mantravādigaḷigaḷavalla nōḍā.
Ondiruhe aruvattārukōṭi kōṇana nuṅgittu nōḍā,
soḷḷeya kālaberaḷalli eṇṭāne nintu āḍuttive nōḍā
apramāṇakūḍalasaṅgamadēvā.