ಶರಣ ಸತ್ತು, ಸುತ್ತಿದ್ದ ಪ್ರಪಂಚ ಕೆಟ್ಟವು ನೋಡಾ.
ನಿರಾಳ ನಿರಂಜನ ನಿರಾಮಯ ನಿರಾಮಯಾತೀತವೆಂಬ
ಮಹಾಗಣೇಶ್ವರರು ಹೊತ್ತುಕೊಂಡು ಹೋದರು ನೋಡಾ.
ಹೊತ್ತುಕೊಂಡು ಹೋಗಿ, ಅತ್ಯತಿಷ್ಠದ್ದಶಾಂಗುಲವೆಂಬ
ನಿಜಸಮಾಧಿಯ ತೆಗೆದು ನಿಕ್ಷೇಪಿಸಿದರು ನೋಡಾ
ಅಪ್ರಮಾಣಕೂಡಲಸಂಗಮದೇವಾ.
Transliteration Śaraṇa sattu, suttidda prapan̄ca keṭṭavu nōḍā.
Nirāḷa niran̄jana nirāmaya nirāmayātītavemba
mahāgaṇēśvararu hottukoṇḍu hōdaru nōḍā.
Hottukoṇḍu hōgi, atyatiṣṭhaddaśāṅgulavemba
nijasamādhiya tegedu nikṣēpisidaru nōḍā
apramāṇakūḍalasaṅgamadēvā.