•  
  •  
  •  
  •  
Index   ವಚನ - 89    Search  
 
ಅಷ್ಟತನುಕೋಣೆಯ ಅಷ್ಟಾತ್ಮದ ನಡುವೆ ಕಟ್ಟಿಪ್ಪವೆಂಟಾನೆಯ ಭೂಮಿಯಾಕಾಶಕ್ಕೆ ಬೆಳೆದಿಪ್ಪ ಒಂಟಿ ನುಂಗಿ, ಉಗುಳಲಾರದಿಪ್ಪುದಿದೇನು ಚೋದ್ಯವೋ! ಒಂಟೆಯ ತಲೆಯಲ್ಲಿ ಉರಿಲಿಂಗ ಹುಟ್ಟಿ, ಎಂಟಾನೆಯ ಸುಟ್ಟು, ಕಂಟಕಂಗಳ ಗೆಲಿದಿಪ್ಪ ಶರಣರ ಚರಣದರುಶನದಿಂದಲೆನ್ನ ಭವ ಹಿಂಗುವಂತೆ[ಮಾಡು] ಭವವಿರಹಿತ ತಂದೆ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
Transliteration Aṣṭatanukōṇeya aṣṭātmada naḍuve kaṭṭippaveṇṭāneya bhūmiyākāśakke beḷedippa oṇṭi nuṅgi, uguḷalāradippudidēnu cōdyavō! Oṇṭeya taleyalli uriliṅga huṭṭi, eṇṭāneya suṭṭu, kaṇṭakaṅgaḷa gelidippa śaraṇara caraṇadaruśanadindalenna bhava hiṅguvante[māḍu] bhavavirahita tande paramaguru paḍuviḍi sid'dhamallināthaprabhuve.