ಬಸುರಿಲ್ಲದ ಬಯಕೆ ಇದೆತ್ತಣದೊ !
ಶಿಶುವಿಲ್ಲದ ಜೋಗುಳ ತೊಟ್ಟಿಲು ತೂಗುವುದಿದೇನೊ!
ಆಸವಲ್ಲದ ಹೊಳೆಯ ಅಂಬಿಗನ ಹುಟ್ಟುನುಂಗಿ,
ಶಶಿಯಿದ್ದ ಗಗನ ಬಿಸಿಯಾಗಿಪ್ಪುದಿದೇನೊ!
ಮಸಣವ ನುಂಗಿದ ಹೆಣ, ವಿಷವ ನುಂಗಿದ ಸರ್ಪನೊ!
ಕೃಷಿ ಹೊಲನ ನುಂಗಿ, ಬೀಜಕೆ ನೆಲೆಯಿಲ್ಲ .
ಆಸವಲ್ಲದ ಕೊಟ್ಟವ ಬೇಡನ ಬಲೆ ನುಂಗಿ
ಎಸೆವುದಿದೇನು ಚೋದ್ಯ ಹೇಳಾ!
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
Transliteration Basurillada bayake idettaṇado!
Śiśuvillada jōguḷa toṭṭilu tūguvudidēno!
Āsavallada hoḷeya ambigana huṭṭunuṅgi,
śaśiyidda gagana bisiyāgippudidēno!
Masaṇava nuṅgida heṇa, viṣava nuṅgida sarpano!
Kr̥ṣi holana nuṅgi, bījake neleyilla.
Āsavallada koṭṭava bēḍana bale nuṅgi
esevudidēnu cōdya hēḷā!
Paramaguru paḍuviḍi sid'dhamallināthaprabhuve.