ತನುವ್ಯಸನ ಮನವ್ಯಸನ ಧನವ್ಯಸನ ರಾಜ್ಯವ್ಯಸನ
ಉತ್ಸಾಹವ್ಯಸನ ವಿಶ್ವಾಸವ್ಯಸನ ಸೇವಕವ್ಯಸನವೆಂಬ ಸಪ್ತವ್ಯಸನಂಗಳು.
ಇವಕ್ಕೆ ವಿವರ:
ತನುವ್ಯಸನವೆತ್ತಿದಲ್ಲಿ ಪುತ್ರಮಿತ್ರಕಳತ್ರಯಾದಿಗಳ
ಬಯಸುತಿಹೆನು.
ವಿಶ್ವಾಸವೆಸನವೆತ್ತಿದಲ್ಲಿ ವಿಶ್ವಾಸದಿಂದ
ಪರರಿಗೆ ಬೋಧಿಸಿ ಭೇದಿಸೇನೆನುತ್ತಿಹನು.
ಸೇವಕವ್ಯಸನವೆತ್ತಿದಲ್ಲಿ
ಹೋಗಬೇಕು ಬರಬೇಕು ತರಬೇಕು
ಕೋಟಲೆಗೊಳಬೇಕು ಎನುತಿಹನು.
ಇಂತೀ ಸಪ್ತವ್ಯಸನಂಗಳಲ್ಲಿ ನೀನಲ್ಲದನ್ಯವಿಲ್ಲವಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
Transliteration Tanuvyasana manavyasana dhanavyasana rājyavyasana
utsāhavyasana viśvāsavyasana sēvakavyasanavemba saptavyasanaṅgaḷu.
Ivakke vivara:
Tanuvyasanavettidalli putramitrakaḷatrayādigaḷa
bayasutihenu.
Viśvāsavesanavettidalli viśvāsadinda
pararige bōdhisi bhēdisēnenuttihanu.
Sēvakavyasanavettidalli
hōgabēku barabēku tarabēku
kōṭalegoḷabēku enutihanu.
Intī saptavyasanaṅgaḷalli nīnalladan'yavillavayyā
paramaguru paḍuviḍi sid'dhamallināthaprabhuve.