ಏನ ಹೇಳುವೆನಯ್ಯಾ? ಸಂಸಾರಬಂಧನದಲ್ಲಿ
ಕಂದಿಕುಂದಿದೆನಯ್ಯಾ.
ಅದು ಎಂತೆಂದರೆ:
ಭಾನುವಿನ ಕಿರಣದಲ್ಲಿ ಬಾಡಿದ ಕಮಲದಂತಾದೆ.
ಗಾಳಿಗುಲಿವ ತರಗೆಲೆಯಂತೆ,
ಸಂಸಾರವೆಂಬ ಸುಂಟರಗಾಳಿ
ಆಕಾಶಕ್ಕೆ ನೆಗವಿ, ಭೂಕಾಂತೆಗೆನ್ನಬಿಟ್ಟು,
ಕಣ್ಣು ಬಾಯೊಳು ಹುಡಿಯಂ ಹೊಯಿದು,
ಮಣ್ಣಕಾಯವ ಮಣ್ಣಿಂಗೆ ಗುರಿಮಾಡಿ ಕಾಡುತಿಪ್ಪುದೀ
ಸಂಸಾರವೆಂಬ ಹೆಮ್ಮಾರಿಯ ಬಾಯಿಗೆನ್ನನಿಕ್ಕದೆ ಕಾಯೋ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
Transliteration Ēna hēḷuvenayyā? Sansārabandhanadalli
kandikundidenayyā.
Adu entendare:
Bhānuvina kiraṇadalli bāḍida kamaladantāde.
Gāḷiguliva tarageleyante,
sansāravemba suṇṭaragāḷi
ākāśakke negavi, bhūkāntegennabiṭṭu,
kaṇṇu bāyoḷu huḍiyaṁ hoyidu,
maṇṇakāyava maṇṇiṅge gurimāḍi kāḍutippudī
sansāravemba hem'māriya bāyigennanikkade kāyō
paramaguru paḍuviḍi sid'dhamallināthaprabhuve.