ಎಂದಾದರೂ ಸಂಸಾರದಂದುಗ ಬಿಡದು ನೋಡಯ್ಯಾ!
ಎಂದಾದರೂ ಸಂಸಾರಬಂಧನ ಬಿಡದು ನೋಡಯ್ಯಾ!
ಎಂದಾದರೂ ಸಂಸಾರವಿಷಯ ಹಿಂಗದು ನೋಡಯ್ಯಾ!
ಸಂಸಾರದಂದುಗ ಕಳೆದು ನಿರ್ದಂದುಗನಾಗಿಪ್ಪುದು ಎಂದೊ ಎಂದೊ?
ನಿಮ್ಮ ನೆನವು ನೆಲೆಗೊಂಬುದು ಎಂದೊ ಎಂದೊ?
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
Transliteration Endādarū sansāradanduga biḍadu nōḍayyā!
Endādarū sansārabandhana biḍadu nōḍayyā!
Endādarū sansāraviṣaya hiṅgadu nōḍayyā!
Sansāradanduga kaḷedu nirdanduganāgippudu endo endo?
Nim'ma nenavu nelegombudu endo endo?
Paramaguru paḍuviḍi sid'dhamallināthaprabhuve.