•  
  •  
  •  
  •  
Index   ವಚನ - 174    Search  
 
ಹೆಳವರ ನಡುವೆ ಅಂಧಕರ ನಡುವೆ ಮನೆಬೆಂದಂತೆ ಸಂಸಾರ. ಅದು ಎಂತೆಂದರೆ: ಹೆಳವ ಅಡಿಯಿಟ್ಟು ನೊಂದಿಸಲಾರ, ಅಂಧಕ ಕಣ್ಣುಗಾಣ. ಅಜ್ಞಾನವೆಂಬುದೆ ಅಂಧಕನ ತೆರ, ಸುಜ್ಞಾನವೆಂಬುದೆ ಹೆಳವನ ತೆರ. ಅದು ಎಂತೆಂದರೆ: ಕರಣಗುಣ ಮನವಿಕಾರಂಗಳು ಹೆಚ್ಚಿಗೆ ನಡೆಯದೆ, ಕೈಕಾಲು ಮುರಿದು ಅಡಿಯಿಡಗೊಡದಕಾರಣ ಹೆಳವನೆಂಬ ಭಾವ. ಇಂತಿವರಿಬ್ಬರ ನಡುವೆ ಬೇವ ಮನೆಯೆಂದರೆ ಪಂಚಭೂತಸಂಬಂಧವಪ್ಪ ದೇಹ. ಈ ದೇಹಕ್ಕೆ ತಾಪತ್ರಯವೆಂಬ ಅಗ್ನಿ ಹತ್ತಿ ಸುಡುತ್ತಿದ್ದಕಾರಣದಿ ಅಗ್ನಿಯೆಂಬ ನಾಮ. ಮರಕೆ ಮರ ಹೊಸದು ಅಗ್ನಿ ಬಿದ್ದಂತೆ ತನುಗುಣ ಮನಗುಣ ಹೊಸೆದಾಡಿ ಕಾಯದೊಳುರಿದುರಿದು ಬೆಂದು ಜೀವ ಘೋರಸಂಸಾರ. ಅದು ಎಂತೆಂದರೆ: ಸಾಕ್ಷಿ : ``ಸಂಸಾರದುಃಖಕಾಂತಾರೇ ನಿಮಗ್ನಶ್ಚ ಮಹಾತಪೇ | ಚಕ್ರದ್ಭ್ರಮತೇ ದೇವಿ ಲಿಂಗಂ ನೈವ ಚ ದರ್ಶಿತಂ || '' ಎಂದುದಾಗಿ, ಇಂತಪ್ಪ ಸಂಸಾರವನೆಂತು ನೀಗುವೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ?
Transliteration Heḷavara naḍuve andhakara naḍuve manebendante sansāra. Adu entendare: Heḷava aḍiyiṭṭu nondisalāra, andhaka kaṇṇugāṇa. Ajñānavembude andhakana tera, sujñānavembude heḷavana tera. Adu entendare: Karaṇaguṇa manavikāraṅgaḷu heccige naḍeyade, kaikālu muridu aḍiyiḍagoḍadakāraṇa heḷavanemba bhāva. Intivaribbara naḍuve bēva maneyendare pan̄cabhūtasambandhavappa dēha. Ī dēhakke tāpatrayavemba agni hatti suḍuttiddakāraṇadi agniyemba nāma. Marake mara hosadu agni biddante tanuguṇa managuṇa hosedāḍi Kāyadoḷuriduridu bendu jīva ghōrasansāra. Adu entendare: Sākṣi: ``Sansāraduḥkhakāntārē nimagnaśca mahātapē | cakradbhramatē dēvi liṅgaṁ naiva ca darśitaṁ ||'' endudāgi, intappa sansāravanentu nīguvenayyā paramaguru paḍuviḍi sid'dhamallināthaprabhuve?