ಗುರುಲಿಂಗವಿದ್ದ ಊರು ಸೀಮೆಯ ಕಂಡಾಕ್ಷಣವೆ
ತುರಗ ಅಂದಣಾದಿಗಳನಿಳಿದು,
ಭಯಭಕ್ತಿಕಿಂಕುರ್ವಾಣದಿಂದ
ಹೋಗಿ, ಗುರುವಿನ ಪಾದೋದಕವ
ಕೊಂಬುದು ಶಿಷ್ಯಗೆ ನೀತಿ.
ಸಾಕ್ಷಿ:
ಶಿಷ್ಯೋ ಗುರುಸ್ಥಿತಂ ಗ್ರಾಮಂ ಪ್ರವೇಶಿತಂ ವಾಹನಾದಿಕಂ |
ವರ್ಜಯೇತ್ ಗೃಹಸಾಮೀಪ್ಯಂ ಛಂದಯೋಶ್ಚ ವಿಪಾದುಕಃ || ''
ಎಂದುದಾಗಿ,
ಹೀಗೆಂಬುದನರಿಯದೆ ಅಹಂಕಾರದಲ್ಲಿ ಬೆಬ್ಬನೆ ಬೆರತು,
ಗುರುವಿದ್ದ ಊರು ಸೀಮೆಯೊಳು
ಅಂದಣ ಕುದುರೆಯನೇರಿ
ನಡೆದರೆ ರೌರವ ನರಕದಲ್ಲಿಕ್ಕುವ
ನಮ್ಮ ಪರಮಗುರು ಪಡುವಿಡಿ
ಸಿದ್ಧಮಲ್ಲಿನಾಥಪ್ರಭುವೆ.
Transliteration Guruliṅgavidda ūru sīmeya kaṇḍākṣaṇave
turaga andaṇādigaḷaniḷidu,
bhayabhaktikiṅkurvāṇadinda
hōgi, guruvina pādōdakava
kombudu śiṣyage nīti.
Sākṣi:
Śiṣyō gurusthitaṁ grāmaṁ pravēśitaṁ vāhanādikaṁ |
varjayēt gr̥hasāmīpyaṁ chandayōśca vipādukaḥ ||''
endudāgi,
hīgembudanariyade ahaṅkāradalli bebbane beratu,
guruvidda ūru sīmeyoḷu
andaṇa kudureyanēri
naḍedare raurava narakadallikkuva
nam'ma paramaguru paḍuviḍi
sid'dhamallināthaprabhuve.