ಅಂಧಕ ಅಂಧಕರು ಕರವಿಡಿದರಣ್ಯದೊಳು
ಹೋಗುತೊಂದು ಕೊಳ್ಳವ ಬಿದ್ದು ಚಾಲಿವರಿವಂತೆ,
ಅಜ್ಞಾನಿ ಗುರುವಿಂಗೆ ಅಜ್ಞಾನಿ ಶಿಷ್ಯನಾದರೆ
ಅವರ ಪಾತಕಕೆ ಕಡೆಯೇನಯ್ಯಾ!
ಹೆಸರಿನ ಗುರುವಿಗೆ ಹೆಸರಿನ ಶಿಷ್ಯನಾಗಿ
ಗುರು-ಶಿಷ್ಯ ಸಂಬಂಧಕ್ಕೆ ಹೋರಾಡಿ
ಒಡಲಾಸೆಗೆ ಲಿಂಗವ ಮಾರಿಕೊಂಬ ಕಡುಪಾಪಿಗೆ
ಗುರುತ್ವವುಂಟೇನಯ್ಯಾ? ಗುರುತ್ವವಿಲ್ಲ.
ಸಾಕ್ಷಿ:
ನಾಮಧಾರಕ ಶಿಷ್ಯಶ್ಚ ನಾಮಧಾರೀ ಗುರುಸ್ತಥಾ |
ಅಂಧಕೋಂಧಕರಾಬದ್ಧೋ ದ್ವಿವಿಧಂ ಪಾತಕಂ ಭವೇತ್ ||''
ಎಂದುದಾಗಿ,
ಬುದ್ಧಿಹೀನ ಶಿಷ್ಯಂಗೆ ಉಪದೇಶವ ಕೊಟ್ಟ ಗುರುವ
ಎದ್ದೆದ್ದಿ ತೆಗೆಯುವರು ರೌರವ ನರಕದಲ್ಲಿ ಎಂದಾತ
ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
Transliteration Andhaka andhakaru karaviḍidaraṇyadoḷu
hōgutondu koḷḷava biddu cālivarivante,
ajñāni guruviṅge ajñāni śiṣyanādare
avara pātakake kaḍeyēnayyā!
Hesarina guruvige hesarina śiṣyanāgi
guru-śiṣya sambandhakke hōrāḍi
oḍalāsege liṅgava mārikomba kaḍupāpige
gurutvavuṇṭēnayyā? Gurutvavilla.
Sākṣi:
Nāmadhāraka śiṣyaśca nāmadhārī gurustathā |
andhakōndhakarābad'dhō dvividhaṁ pātakaṁ bhavēt ||''
endudāgi,
bud'dhihīna śiṣyaṅge upadēśava koṭṭa guruva
eddeddi tegeyuvaru raurava narakadalli endāta
nam'ma paramaguru paḍuviḍi sid'dhamallināthaprabhuve.