ವಿಕಾರ ಈ ಜನ್ಮದ ಹೊರೆಯ ಕಳೆವುದೆಂದು,
ಭೂಕಾರ ಭೂತ ಪಿಶಾಚಿಗಳ ಗ್ರಹಗಳ
ನಿಟ್ಟೊರಸುವ ಅರಿಯೆಂದು,
ತಿಕಾರ ಅಂತರಂಗದ ಒಳಹೊರಗೆ
ಹಿಡಿದಿಹ ತಿಮಿರಕೆ ಜ್ಯೋತಿಸ್ವರೂಪವೆಂದು
ಶ್ರೀ ವಿಭೂತಿಯ ಧರಿಸ ಕಲಿಸಿದನಯ್ಯಾ ಶ್ರೀಗುರು.
ಪಂಚಗವ್ಯ ಗೋಮಯದಿಂದುದಯವಾದ ಶ್ರೀವಿಭೂತಿ
ಪಂಚಭೂತದ ಪೂರ್ವಗ್ರಹವ
ಕಳೆವುದೆಂದು ನಿರೂಪಿಸಿ ಧರಿಸಿದನಯ್ಯಾ.
ಇಂತಪ್ಪ ಶ್ರೀ ವಿಭೂತಿಯ ಸಂತತ ಧರಿಸಿ
ನಿಶ್ಚಿಂತನಾಗಿದ್ದೆನು ಕಾಣಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
Transliteration Vikāra ī janmada horeya kaḷevudendu,
bhūkāra bhūta piśācigaḷa grahagaḷa
niṭṭorasuva ariyendu,
tikāra antaraṅgada oḷahorage
hiḍidiha timirake jyōtisvarūpavendu
śrī vibhūtiya dharisa kalisidanayyā śrīguru.
Pan̄cagavya gōmayadindudayavāda śrīvibhūti
pan̄cabhūtada pūrvagrahava
kaḷevudendu nirūpisi dharisidanayyā.
Intappa śrī vibhūtiya santata dharisi
niścintanāgiddenu kāṇā
paramaguru paḍuviḍi sid'dhamallināthaprabhuve.