•  
  •  
  •  
  •  
Index   ವಚನ - 270    Search  
 
ಭಸಿತವಿದು ಶಿವರೂಪೆಂದು ನೊಸಲೊಳು ಧರಿಸಿದಡವ ನಿತ್ಯ. ಭವಬಂಧನಕೆ ಅರಿಯು ಭಕಾರವು ಶಿವಪದದ ಬಯಕೆಯನೀವ ಸಿಕಾರವು ಕವಿವ ತಾಮಸಗುಣಹಾರ ತಕಾರವೆಂದು ವಿವರಿಸಿ ಶ್ರೀ ಭಸಿತವನೆನ್ನ ಭಾಳೊಳು ತವೆ ಪೂಸಕಲಿಸಿದ ಗುರುವ ನೆನೆದು ನಾ ಜವನ ಪಾಶವನು ಸುಟ್ಟು ನಿಟ್ಟೊರೆಸಿದೆನು. | 1 | ಈ ಜನ್ಮದ ಹೊಲೆಗಳೆವ 'ವಿ'ಕಾರವು ಸಾಜ ಭೂತಭಯ ಭೀತಿಗೆ `ಭೂ'ಕಾರವು ರಾಜಿಪ ತಿಮಿರಕೆ ಜ್ಯೋತಿ `ತಿ'ಕಾರವೆಂದು ಮೂಜಗಪಾಲಗೆ ಸಿತಗೊರಳನಾಮವು ಸೂಚಿಸುತಿಹ [ವಿ]ಭೂತಿಯ ಧರಿಸಿಯೆ ನೀ ಜೀವಿಸು ಮಗನೆಂದು ಅರುಹಿದ ಗುರುವೆ. | 2 | ಪ್ರಥಮಪುಂಡ್ರ ಬ್ರಹ್ಮತ್ಯಕರ ದ್ವಿತೀಯಪುಂಡ್ರ ವಿಷ್ಣುವಿನ ಸ್ಥಿತಿಗತಿಕ್ಷಯಂ ತೃತೀಯ ಪುಂಡ್ರ ರುದ್ರನ ಲಯಗೆಡವುದೆಂದು ಪ್ರತಿಯಿಲ್ಲ ತ್ರಿಪುಂಡ್ರವ ಭಾಳೊಳು ಸದವಕಾಲ ಧರಿಸಿದಡವ ನಿತ್ಯನೆಂದುನ್ನತಿ ಪೊಗಳೆ ವೇದ ಅಷ್ಟ ಪೌರಾಣದಲ್ಲಿ. | 3 | ಪಂಚಗವ್ಯ ಗೋಮಯದಿ ಜನಿಸಿಯೆ ಪಂಚಮುಖಗೆ ಆಭರಣವೆನಿಸಿ ತನು ಪಂಚಭೂತಂಗಳನಳಿದು ಪಣೆಯೊಳಿರುವ ಸಂಚಿತ ಪ್ರಾರಬ್ಧಾಗಾಮಿ ತ್ರೈಗಳ ಹಂಚುಹರಿಯ ಮಾಡುರುಹುವ ಭಸ್ಮ ಪ್ರ ಪಂಚಿಲ್ಲದೆ ಧರಿಸಿದಡವ ಮುಕ್ತ . | 4 | ಚಿದಂಗ ವೃಷಭಾಕಾರ ವಿಭೂತಿಯ ಅದ ಸರ್ವಾಂಗಕುದ್ಧೂಳನ ಮಾಡಿಪ ಸದ್ಭಕ್ತನೆ ಶಿವ ತಾನೆಂದು ಮುದದಿ ಪೊಗಳುತಿಹ ವೇದಾಗಮಗಳು ಮಿದ ನೀ ಧರಿಸೆಂದೆನಗರುಹಿದ ಗುರು ಮದಹರ ಪಡುವಿಡಿ ಸಿದ್ಧಮಲ್ಲೇಶಾ. | 5 |
Transliteration Bhasitavidu śivarūpendu nosaloḷu dharisidaḍava nitya. Bhavabandhanake ariyu bhakāravu śivapadada bayakeyanīva sikāravu kaviva tāmasaguṇahāra takāravendu vivarisi śrī bhasitavanenna bhāḷoḷu tave pūsakalisida guruva nenedu nā javana pāśavanu suṭṭu niṭṭoresidenu. | 1 | Ī janmada holegaḷeva'vi'kāravu sāja bhūtabhaya bhītige `bhū'kāravu rājipa timirake jyōti `ti'kāravendu mūjagapālage sitagoraḷanāmavu sūcisutiha [vi]bhūtiya dharisiye nī jīvisu maganendu aruhida guruve. | 2 | Prathamapuṇḍra brahmatyakara dvitīyapuṇḍra viṣṇuvina sthitigatikṣayaṁ tr̥tīya puṇḍra rudrana layageḍavudendu pratiyilla tripuṇḍrava bhāḷoḷu sadavakāla dharisidaḍava nityanendunnati pogaḷe vēda aṣṭa paurāṇadalli. | 3 | Pan̄cagavya gōmayadi janisiye pan̄camukhage ābharaṇavenisi tanu pan̄cabhūtaṅgaḷanaḷidu paṇeyoḷiruva san̄cita prārabdhāgāmi traigaḷa han̄cuhariya māḍuruhuva bhasma pra pan̄cillade dharisidaḍava mukta. | 4 | Cidaṅga vr̥ṣabhākāra vibhūtiya ada sarvāṅgakud'dhūḷana māḍipa sadbhaktane śiva tānendu mudadi pogaḷutiha vēdāgamagaḷu mida nī dharisendenagaruhida guru madahara paḍuviḍi sid'dhamallēśā. | 5 |