ಕಾರ್ಯನಲ್ಲ, ಕಾರಣನಲ್ಲ,
ಕಲ್ಪಿತನಲ್ಲ, ನಿರ್ವಿಕಲ್ಪಿತನಲ್ಲ,
ನೆನಹು ಮಾತ್ರದಿಂದ ಜಗವ ಸೃಷ್ಟಿಸಿದೆನೆಂಬ
ಭಾವ ಬಣಿತೆಯವಲ್ಲ,
ಇದಿರಿಂಗೆ ತಾನಿಲ್ಲ, ತನಗೆ ಇದಿರಾಗಿ ಒಂದು ವಸ್ತುವಿಲ್ಲ,
ಪ್ರತಿಯಿಲ್ಲದಪ್ರತಿಮ, ಅನುಪಮ ಮಹಿಮ,
ನಿನ್ನ ನಿಃಕಲನೆಂದೆಂಬರಯ್ಯ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Transliteration Kāryanalla, kāraṇanalla,
kalpitanalla, nirvikalpitanalla,
nenahu mātradinda jagava sr̥ṣṭisidenemba
bhāva baṇiteyavalla,
idiriṅge tānilla, tanage idirāgi ondu vastuvilla,
pratiyilladapratima, anupama mahima,
ninna niḥkalanendembarayya,
mahāliṅgaguru śivasid'dhēśvara prabhuvē.