ಚಿತ್ತ ಬುದ್ಧಿ ಅಹಂಕಾರ ಹುಟ್ಟದಂದು,
ಮನ ಜ್ಞಾನ ಭಾವಂಗಳುತ್ಪತ್ತಿಯಿಲ್ಲದಂದು,
ಜ್ಞಾತೃ ಜ್ಞಾನ ಜ್ಞೇಯಂಗಳು ಹುಟ್ಟದಂದು,
ಜ್ಞಾನ ಸುಜ್ಞಾನ ಮಹಜ್ಞಾನವೆಂಬ, ವೃತ್ತಿಜ್ಞಾನಂಗಳಿಲ್ಲದಂದು,
ಅಖಂಡ ಪರಿಪೂರ್ಣ ಅದ್ವಯ ನಿಃಕಲ ನಿಜಜ್ಞಾನಮೂರ್ತಿ
ನೀನೆಯಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Transliteration Citta bud'dhi ahaṅkāra huṭṭadandu,
mana jñāna bhāvaṅgaḷutpattiyilladandu,
jñātr̥ jñāna jñēyaṅgaḷu huṭṭadandu,
jñāna sujñāna mahajñānavemba, vr̥ttijñānaṅgaḷilladandu,
akhaṇḍa paripūrṇa advaya niḥkala nijajñānamūrti
nīneyayyā, mahāliṅgaguru śivasid'dhēśvara prabhuvē.