•  
  •  
  •  
  •  
Index   ವಚನ - 65    Search  
 
ಪರಶಿವನಿಂದ ಚಿಚ್ಛಕ್ತಿ. ಆ ಚಿಚ್ಛಕ್ತಿಯಿಂದ,ಪರಾ ಆದಿ ಇಚ್ಛಾ ಜ್ಞಾನ ಕ್ರಿಯೆಯೆಂಬ ಪಂಚಕಲಾಶಕ್ತಿಯರುದಯವಾದರು ನೋಡಾ. ಆ ಕ್ರಿಯಾಶಕ್ತಿಯಿಂದ ನಿವೃತ್ತಿಕಲೆ. ಆ ನಿವೃತ್ತಿಕಲೆಯಿಂದ ಮಹಾಮಾಯೆ ಹುಟ್ಟಿತ್ತು ನೋಡಾ. ಆ ಮಹಾಮಾಯಾಶಕ್ತಿಯಿಂದ ಸಮಸ್ತ ಜಗತ್ತಿನ ಜನನ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Transliteration Paraśivaninda cicchakti. Ā cicchaktiyinda,parā ādi icchā jñāna kriyeyemba pan̄cakalāśaktiyarudayavādaru nōḍā. Ā kriyāśaktiyinda nivr̥ttikale. Ā nivr̥ttikaleyinda mahāmāye huṭṭittu nōḍā. Ā mahāmāyāśaktiyinda samasta jagattina janana nōḍā, mahāliṅgaguru śivasid'dhēśvara prabhuvē.