ಅನಾದಿಯಾಗಿ ಶಿವನುಂಟು,
ಮಾಯೆಯು ಉಂಟು,
ಆತ್ಮನೂ ಉಂಟೆಂಬುದ ನಾವರಿಯೆವಯ್ಯ.
ಆದಿ ಅನಾದಿ ಸುರಾಳ ನಿರಾಳವಿಲ್ಲದಂದು,
ಮಾಯೆಯನು ಕಾಣೆ, ಆತ್ಮನನು ಕಾಣೆ.
ಮಹಾದೇವ ತಾನೊಬ್ಬನೇ ಇದ್ದೆನೆಂಬುದು
ಕಾಣಬಂದಿತ್ತು ನೋಡಾ ಶಿವಜ್ಞಾನದೃಷ್ಟಿಗೆ.
ಆ ಲಿಂಗನಿರ್ಮಿತದಿಂದ ಮಾಯೆ ಹುಟ್ಟಿತ್ತು ನೋಡಾ.
ಆ ಮಾಯೆಯಿಂದ ತತ್ವಬ್ರಹ್ಮಾಂಡಾದಿ
ಲೋಕಾದಿ ಲೋಕಂಗಳು ಹುಟ್ಟಿದವು ನೋಡಾ.
ಹೀಂಗೆ ನಿನ್ನ ನೆನಹುಮಾತ್ರದಿಂದ ತ್ರೈಜಗ ಹುಟ್ಟಿತ್ತು ನೋಡಾ.
ಆ ತ್ರೈಜಗಂಗಳ ಉತ್ಪತ್ತಿ ಸ್ಥಿತಿ ಲಯಂಗಳಿಗೆ ನೀನೆ ಕಾರಣನಯ್ಯಾ,
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Transliteration Anādiyāgi śivanuṇṭu,
māyeyu uṇṭu,
ātmanū uṇṭembuda nāvariyevayya.
Ādi anādi surāḷa nirāḷavilladandu,
māyeyanu kāṇe, ātmananu kāṇe.
Mahādēva tānobbanē iddenembudu
kāṇabandittu nōḍā śivajñānadr̥ṣṭige.
Ā liṅganirmitadinda māye huṭṭittu nōḍā.
Ā māyeyinda tatvabrahmāṇḍādi
lōkādi lōkaṅgaḷu huṭṭidavu nōḍā.
Hīṅge ninna nenahumātradinda traijaga huṭṭittu nōḍā.
Ā traijagaṅgaḷa utpatti sthiti layaṅgaḷige nīne kāraṇanayyā,
mahāliṅgaguru śivasid'dhēśvara prabhuvē.