•  
  •  
  •  
  •  
Index   ವಚನ - 82    Search  
 
ವಸ್ತುವಿನ ಸ್ವರೂಪ ಹೇಳಿಹೆ ಕೇಳು, ಹೊಳೆವುತ್ತಿದ್ದ ಕಾಲಾಗ್ನಿಯೋಪಾದಿಯ ಕಾಂತಿಯನುಳ್ಳುದು; ಅನಂತಕೋಟಿ ಮಿಂಚುಗಳ ಪ್ರಭೆಯ ಪ್ರಕಾಶವನುಳ್ಳುದು; ಅನಂತಕೋಟಿ ಸೋಮ ಸೂರ್ಯರ ಪ್ರಭೆಯ ಪ್ರಕಾಶವನುವುಳ್ಳದು; ಮುತ್ತು ಮಾಣಿಕ್ಯ ನವರತ್ನದ ಕಿರಣಂಗಳ ಪ್ರಭೆಯ ಪ್ರಕಾಶವನುಳ್ಳುದು; ನಿನ್ನ ಪಿಂಡದ ಮಧ್ಯದಲ್ಲಿ ಉದಯವಾಗಿ ತೋರುವ ಪಿಂಡಜ್ಞಾನದ ಮಹದರುಹೆ ಪರಬ್ರಹ್ಮವೆಂದು ಅರಿಯಲು ಯೋಗ್ಯವೆಂದೆನಯ್ಯ ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Transliteration Vastuvina svarūpa hēḷihe kēḷu, hoḷevuttidda kālāgniyōpādiya kāntiyanuḷḷudu; anantakōṭi min̄cugaḷa prabheya prakāśavanuḷḷudu; anantakōṭi sōma sūryara prabheya prakāśavanuvuḷḷadu; muttu māṇikya navaratnada kiraṇaṅgaḷa prabheya prakāśavanuḷḷudu; ninna piṇḍada madhyadalli udayavāgi tōruva piṇḍajñānada mahadaruhe parabrahmavendu ariyalu yōgyavendenayya mahāliṅgaguru śivasid'dhēśvara prabhuvē.