•  
  •  
  •  
  •  
Index   ವಚನ - 197    Search  
 
ಸದ್ಗುರುವಿನ ದೆಸೆಯಿಂದ ಆವನೋರ್ವನ ಕಿವಿಯಲ್ಲಿ ಬ್ರಹ್ಮೋಪದೇಶವು ಹೇಳಲ್ಪಟ್ಟಿತ್ತು, ಆ ಶಬ್ದವೇ ಬೀಜವೆನಿಸಿಕೊಂಡಿತ್ತಯ್ಯ. ಅದು ಆವುದಯ್ಯ ಎಂದಡೆ: ಶ್ರೀಗುರುವಿನ ದೆಸೆಯಿಂದ ಪಡೆದ ಶಿವಮಂತ್ರಾಕ್ಷರವೇ ಬೀಜವೆನಿಸಿಕೊಂಡಿತ್ತಯ್ಯ. ಅಂಥಾ ಪ್ರಾಣಿಯೆ ಜ್ಞಾನಕಾಯನೆನಿಸಿಕೊಂಬನಯ್ಯ. ಶಿವಮಂತ್ರೋಪದೇಶವಿಲ್ಲದಾತನು ಪ್ರಕೃತಿಕಾಯನೆನಿಸಿಕೊಂಬನಯ್ಯಾ. ಇದು ಕಾರಣ, ಪ್ರಕೃತಿಕಾಯವೆಂದು ಜ್ಞಾನಕಾಯವೆಂದು ಎರಡು ಭೇದವಾಗಿಪ್ಪುದಯ್ಯ. ಶಿವಮಂತ್ರ ದೀಕ್ಷೋಪದೇಶವಾಗಲಾಗಿ, ಪ್ರಕೃತಿಕಾಯ ಹೋಗಿ ಜ್ಞಾನಕಾಯವಪ್ಪುದು ತಪ್ಪದಯ್ಯ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Transliteration Sadguruvina deseyinda āvanōrvana kiviyalli brahmōpadēśavu hēḷalpaṭṭittu, ā śabdavē bījavenisikoṇḍittayya. Adu āvudayya endaḍe: Śrīguruvina deseyinda paḍeda śivamantrākṣaravē bījavenisikoṇḍittayya. Anthā prāṇiye jñānakāyanenisikombanayya. Śivamantrōpadēśavilladātanu prakr̥tikāyanenisikombanayyā. Idu kāraṇa, prakr̥tikāyavendu jñānakāyavendu eraḍu bhēdavāgippudayya. Śivamantra dīkṣōpadēśavāgalāgi, prakr̥tikāya hōgi jñānakāyavappudu tappadayya, mahāliṅgaguru śivasid'dhēśvara prabhuvē.