•  
  •  
  •  
  •  
Index   ವಚನ - 223    Search  
 
ಇಹಲೋಕದಲ್ಲಿ ಲಿಂಗವ ಪೂಜಿಸಿ ಪರಲೋಕದ ಪದವಿಯ ಬಯಸುವನಲ್ಲ ನೋಡಾ. ಇಹಪರವನೊಳಕೊಂಡ ಪರಿಪೂರ್ಣಲಿಂಗವು ತನ್ನ ಸರ್ವಾಂಗದಲ್ಲಿ ಸನ್ನಿಹಿತವಾಗಿರಲು ಆ ಲಿಂಗದಲ್ಲಿ ತನ್ನಂಗವ ಬೆರಸಿ ಆ ಶುದ್ಧ ಪರಮಾತ್ಮಲಿಂಗವೇ ಗೂಡಾಗಿಪ್ಪ ಲಿಂಗನಿಷ್ಠನ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
Transliteration Ihalōkadalli liṅgava pūjisi paralōkada padaviya bayasuvanalla nōḍā. Ihaparavanoḷakoṇḍa paripūrṇaliṅgavu tanna sarvāṅgadalli sannihitavāgiralu ā liṅgadalli tannaṅgava berasi ā śud'dha paramātmaliṅgavē gūḍāgippa liṅganiṣṭhana nōḍā, mahāliṅgaguru śivasid'dhēśvara prabhuvē.